Thursday 20 November 2008


ಬಾಳೆಮರ - ಬಾಳ ಸಾರ


ಹೊಲದ ಮಧ್ಯೆದಿ ಬೆಳೆದು ನಿಂತಿತ್ತೊಂದು 
ಬಾಳೆಮರ .... 

ದರ್ಪವನ್ನೆಲ್ಲ ವರ್ಣವಾಗಿಸಿ ಬೀಗಿ ನಿಂತಿತ್ತು 
ಅದರ ಎಲೆ ... 

ಎತ್ತರದ ಆಗಸದ ನೀಲಿಗೆ - ಹಸಿರ ಸಿರಿವಂತಿಕೆಯ 
ಮೆರೆಯುತ, ಅಹಮ್ಕಾರದಿ ಆರ್ಭಟಿಸಿತ್ತು, ಅದು ನೋಡ ...
 
ಬದುಕ ನೀತಿಯ ಕಲಿತು , ಬರುವ ನಾಳೆಯ ಅರಿತು 
ಅದೇ ಎಲೆಯ ಬುಡಕೆ ಒರಗಿತ್ತು , ಒಂದು ಬಾಳೆ ಗೊನೆ... 

ಭಾರವನು ಹೊತ್ತು, ಬೆಳೆಸಿ ನಿಲ್ಲಿಸಿದ ಇಳೆಗೆ;ವಿನಯದಿ ನಮಿಸಿ, 
ಹೊದಿಕೆಯೊಳಹೊಕ್ಕಿ ಅಡಗಿತ್ತು  ಅದು ಕಾಣ ...
 
ದಿನವೂ ಕಳೆಯಿತು , ಋತುವೂ ಹರೆಯಿತು
ಮುದುರಿ ಒಣಗಿತು ಎಲೆಯು ....
 
ಎಲೆಯು ಅಳಿಯಿತು ; ಪರಿತಪಿಸಿ, ಕಳೆದು ಕೊಂಡ ಬಣ್ಣಕೆ, 
ಕಲಿಯಲಾರದ ಪಾಠಕೆ .... 

                                     --- ಪ್ರಭಾತ್

1 comment:

Unknown said...

ತುಂಬಾ ಚನ್ನಾಗಿದೆ ಪ್ರಭಾತ್. ಒಳ್ಳೆ ಒಳ್ಳೆ ಕವಿತೆಗಳು ಬರ್ದಿದಿಯ. ಅಭಿನಂದನೆಗಳು....